Kadalatadiya Bhargava: Shivarama Karantha

ಕಡಲತಡಿಯ ಭಾರ್ಗವ: ಶಿವರಾಮ ಕಾರಂತ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಭಾಗ, ಕನ್ನಡ ಸಂಘ, ವಿಕಿಪೀಡಿಯಾ ಅಸೋಸಿಯೇಶನ್, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ಸಹಯೋಗದಲ್ಲಿ ಮಾಲಿಕೆ-3ರಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ-ಕವಿ-ಕಾವ್ಯ-ಸಾಹಿತ್ಯ-ಪರಂಪರೆಯಲ್ಲಿ ಕಡಲತಡಿಯ ಭಾರ್ಗವ-ಶಿವರಾಮ ಕಾರಂತ ವಿಶೇಷೋಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು.

ಕಾರಂತರು ತನ್ನ ಜೀವನದುದ್ದಕ್ಕೂ ಕಂಡ ಜೀವಂತ ವ್ಯಕ್ತಿಗಳನ್ನೇ ತನ್ನ ಕಾದಂಬರಿಯಲ್ಲಿ ಕೃತಿಯಾಗಿಸಿದವರು. ಅಂದಿಗೂ ಎಂದಿಗೂ ನಿತ್ಯಸತ್ಯ ವಿಚಾರಗಳನ್ನೇ ಸಾಹಿತ್ಯ ರೂಪಕ್ಕಿಳಿಸಿದವರು ಎಂದು ಬೆಳ್ತಂಗಡಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಬ್ರಹ್ಮಣ್ಯ ಕೆ ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಪ್ರವೀಣ್ ಮಾರ್ಟಿಸ್, ಎಸ್.ಜೆ.ರವರು ಶಿವರಾಮ ಕಾರಂತರ ಕನ್ನಡ ಸೇವೆಯನ್ನು  ಕುರಿತು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡುಗಳನ್ನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್ ಅವರು ಸ್ವಾಗತಿಸಿದರು. ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸುಧಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ವಿಕಿಪೀಡಿಯಾ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ವಿಶ್ವನಾಥ ಬದಿಕಾನರವರು ವಂದಿಸಿದರು.